Điện là một nguồn lực quan trọng để phát triển. Một hiệu quả, đáng tin cậy và được tổ chức tốt ngành điện có khả năng cung cấp điện chất lượng cùng với chất lượng dịch vụ là một điều cần thiết cho bất kỳ cộng đồng tiến bộ.
ದೃಷ್ಟಿಕೋನ
ಗ್ರಾಹಕರಿಗೆ ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಗುಣಮಟ್ಟದ ವಿದ್ಯತ್ ನ್ನು ಒದಗಿಸುವ ಮೂಲಕ ಆರ್ಥಿಕ ಅಭಿವೃದ್ದಿಯಲ್ಲಿ ನಮ್ಮ ಕೊಡುಗೆಯನ್ನು ನೀಡುವುದರ ಜೊತೆಗೆ ಸಮಾಜದ ಸ್ಥಿತಿಗತಿಗಳನ್ನು ಅಭಿವೃದ್ದಿಗೊಳಿಸುವುದು ನಮ್ಮ ಅಸ್ತಿತ್ವಕ್ಕೆ ಕಾರಣವಾಗಿದೆ.
ಮೆಸ್ಕಾಂ ನ ಧ್ಯೆಯೋದ್ದೇಶಗಳು
ಮೆಸ್ಕಾಂ ಕಂಪೆನಿಯು ಆರ್ಥಿಕವಾಗಿ ಸ್ವತಂತ್ರವಾಗಿ ಗ್ರಾಹಕ ಪರ ಕಾಳಜಿ ಹೊಂದಿದ ಸಂಸ್ಥೆಯಾಗಿ ಹೊರಹೊಮ್ಮಲು ನಾವು ಈ ಕೆಳಗಿನ ಧ್ಯೇಯಗಳನ್ನು ಹೊಂದಿದ್ದೇವೆ.
ಶೇಕಡಾ 100 ರಷ್ಟು ಮಾಪಕ ಅಳವಡಿಕೆ, ಮಾಪಕ ಓದುವಿಕೆ, ಬಿಲ್ ನೀಡುವುದು ಮತ್ತು ಸಂಗ್ರಹಣೆ.
ತಪ್ಪಿತಸ್ಥರ ಶೇಕಡಾ 100 ರಷ್ಟು ವಿದ್ಯುತ್ ಸಂಪರ್ಕ ತಪ್ಪಿಸುವುದು.
ವಿತರಣೆಯಲ್ಲಿ ಸಷ್ಟವನ್ನು ಶೇಕಡಾ 15 ಕ್ಕೆ ಸೀಮಿತಗೊಳಿಸುವುದು.
ಶೇಕಡಾ 100 ರಷ್ಟು ಕಂಪ್ಯೂಟರೀಕಣದಿಂದ ತಪ್ಪಿಲ್ಲದ ಬಿಲ್ ನೀಡುವಿಕೆ.
ಆಯ್ದ ಪೀಡರ್ ಗಳಲ್ಲಿ ಶೇಕಡಾ 100 ರಷ್ಟು ನಂಬಲರ್ಹ ವಿದ್ಯುತ್ ಸರಬರಾಜಿನ ಸೂಚ್ಯಂಕಕ್ಕೆ ತರುವುದು.
ಖಚಿತ ಮಾಹಿತಿ ಸಂಗ್ರಹ ಮತ್ತು ವರದಿ ಮಾಡುವುದು.
ಹೆಚ್ಚಿನ ವಿದ್ಯತ್ ಬಳಸಲು ಪ್ರೋತ್ಸಾಹ ಕೊಡುವುದರ ಜೊತೆಗೆ ಗ್ರಾಹಕರಿಗೆ ಸೂಕ್ತ ದರದೊಂದಿಗೆ ಉತ್ತಮ ಸೇವೆಯನ್ನು ಒದಗಿಸುವುದು.
ನಮ್ಮ ಚಿಂತನಾ ಮೌಲ್ಯಗಳು
ಗ್ರಾಹಕರ ಕಡೆಗೆ ಕೇಂದ್ರೀಕೃತ ಮತ್ತು ಸ್ಪಂದನ
ವಾಣಿಜ್ಯಕವಾಗಿ ದಕ್ಷತೆಯಿಂದಿರುವುದು
ಫಲಿತಾಂಶಕಾಯಕ ಚಟುವಟಿಕೆಗಳು
ನೌಕರರ ಹಿತ ಮತ್ತು ಕಲ್ಯಾಣ
Online MESCOM Bill view, Bill payment, Compliant register etc.,